Our MISSION
ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಂಗಸಂಸ್ಥೆಯಾದ ಕೆಐಪಿಎಲ್ ಅಕಾಡೆಮಿಯು ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಆನ್‌ಲೈನ್ ಶಿಕ್ಷಣಕ್ಕೆ ಪ್ರಾಧಾನ್ಯತೆ ಒದಗಿಸಿದೆ. ಕನ್ನಡದಲ್ಲಿ ಅನೇಕ ವಿಚಾರಗಳನ್ನು ತಿಳಿಸುವ ಜಾಲತಾಣ ಇದಾಗಿದ್ದು, ವಿಷಯತಜ್ಞರ ಪಕ್ವತೆಯನ್ನು ಆಧರಿಸಿ ವಿಚಾರಗಳನ್ನು ತಿಳಿಸಲು ವೇದಿಕೆಯನ್ನು ಒದಗಿಸುವುದು ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯನ್ನು ಗಮನದಲ್ಲಿರಿಸಿ, ರಾಜ್ಯದ ಎಲ್ಲೆಡೆಯ ಜನರಿಗೆ ವಿಚಾರಗಳು ಕನ್ನಡದಲ್ಲೇ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಸಂಸ್ಥೆಯ ಆಶಯವಾಗಿರುತ್ತದೆ.
Vision & Values
ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಂಗಸಂಸ್ಥೆಯಾದ ಕೆಐಪಿಎಲ್ ಅಕಾಡೆಮಿಯು ಕನ್ನಡಿಗರನ್ನು ಉದ್ಯೋಗಕ್ಕೆ ಅಣಿಯಾಗುವಂತೆ ಸಿದ್ಧವಾಗಿಸಲು ಸಜ್ಜಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯು ಕೇವಲ ಪುಸ್ತಕದ ವಿಚಾರಗಳನ್ನು ತಿಳಿಸಿ, ನಿಜಜೀವನಕ್ಕೆ ಬೇಕಾದ ಸ್ಕಿಲ್ ಗಳನ್ನು ನೀಡುವಲ್ಲಿ ಎಡವುತ್ತಿದೆ. ಇದರಿಂದಾಗಿ ಹೊಸ ಪೀಳಿಗೆಯವರಿಗೆ ಕನ್ನಡ ಮಾಧ್ಯಮದಲ್ಲಿ ವಿಚಾರಗಳನ್ನು ತಿಳಿಯಲು ಕಷ್ಟವಾಗಿ, ಉದ್ಯೋಗಕ್ಕೆ ಬಂದಾಕ್ಷಣ ತೊಡಕುಗಳನ್ನು ಎದುರಿಸುತ್ತಿದ್ಧಾರೆ. ಈ ತೊಡಕುಗಳನ್ನು ನಿವಾರಿಸಿ, ಎಲ್ಲ ಬಗೆಯ ಮಾಹಿತಿಗಳೂ ಕನ್ನಡದಲ್ಲಿ ದೊರಕುವಂತಾಗಲಿ ಎನ್ನುವುದು ಕೆಐಪಿಎಲ್ ಸಂಸ್ಥೆಯ ಸದಾಶಯ. ಅದಕ್ಕಾಗಿ ಸ್ವತ: ಜನಾಪೇಕ್ಷಿತ ಕೋರ್ಸ್‌ಗಳನ್ನು ನೀಡುವುದಲ್ಲದೇ, ಇತರ ಕನ್ನಡದ ತಜ್ಞರನ್ನೂ ಅಹ್ವಾನಿಸಿ, ಉತ್ತಮ ಮಾಹಿತಿಗಳನ್ನು ಕೈಗೆಟಕುವ ದರದಲ್ಲಿ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ.