ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಕೆಐಪಿಎಲ್ ಅಕಾಡೆಮಿ ಕಳೆದ 9 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆನ್‌ಲೈನ್ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ. ಈ ಪ್ಲಾಟ್‌ಫಾರ್ಮ್‌ವು ಕನ್ನಡದಲ್ಲಿ ವಿವಿಧ ವಿಷಯಗಳನ್ನು ಸರಳವಾಗಿ ನೀಡುವ ಜಾಲತಾಣವಾಗಿ ರೂಪುಗೊಂಡಿದ್ದು, ವಿಷಯತಜ್ಞರ ನೈಪುಣ್ಯತೆಯನ್ನು ಆಧರಿಸಿ ನಿರ್ದಿಷ್ಟ ವಿಷಯಗಳನ್ನು ವಿಶ್ವಾಸಾರ್ಹವಾಗಿ ನೀಡಲು ವೇದಿಕೆಯಾಗಿರುವುದು ಇದರ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಹಿತವನ್ನು ಮೊದಲ ಸ್ಥಾನದಲ್ಲಿ ಇರಿಸಿಕೊಂಡು, ಕರ್ನಾಟಕದ ಮೂಲೆಮೂಲೆಗಳಿಂದಲೂ ಜನರು ಕನ್ನಡದಲ್ಲಿಯೇ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆಯೇ ತಿಳಿಯುವಂತೆಯೂ ಮಾಡುವದು ಸಂಸ್ಥೆಯ ಧ್ಯೇಯವಾಗಿದೆ.
ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಕೆಐಪಿಎಲ್ ಅಕಾಡೆಮಿ, ಕನ್ನಡಿಗರನ್ನು ಉದ್ಯೋಗಕ್ಕೆ ತಯಾರಾಗುವಂತೆ ಸಿದ್ಧಗೊಳಿಸಲು ನಿಷ್ಠೆಯಿಂದ ಶ್ರಮಿಸುತ್ತಿದೆ. ಇಂದಿನ ಶಿಕ್ಷಣ ಪದ್ಧತಿಗಳು ಬಹುತೇಕ ಪಾಠ್ಯಪುಸ್ತಕಗಳ ತಾತ್ವಿಕಜ್ಞಾನಕ್ಕೆ ಸೀಮಿತವಾಗಿದ್ದು, ನೈಜ ಜೀವನದಲ್ಲಿ ಅಗತ್ಯವಾಗುವ ಕೌಶಲ್ಯಗಳನ್ನು ನೀಡುವಲ್ಲಿ ನಿರ್ಲಕ್ಷ್ಯವಾಗುತ್ತಿವೆ. ಈ ಕಾರಣದಿಂದ ಹೊಸ ತಲೆಮಾರಿಗೆ ಕನ್ನಡದಲ್ಲಿ ವಿಷಯಗಳನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತಿದ್ದು, ಉದ್ಯೋಗದ ಹೊಸ್ತಿಲಲ್ಲಿ ತೊಡಕುಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಅಡಚಣೆಗಳನ್ನು ಪರಿಹರಿಸಿ, ಎಲ್ಲಾ ತರಹದ ಜ್ಞಾನ ಹಾಗೂ ಕೌಶಲ್ಯಗಳು ಕನ್ನಡದಲ್ಲಿ ಸುಲಭವಾಗಿ ಲಭ್ಯವಾಗುವಂತಾಗಲಿ ಎಂಬುದೇ ಕೆಐಪಿಎಲ್ ಅಕಾಡೆಮಿಯ ಉದಾತ್ತ ಉದ್ದೇಶ.
ಈ ದೃಷ್ಟಿಕೋಣದಲ್ಲಿ, ಸಂಸ್ಥೆಯು ಜನರ ಅವಶ್ಯಕತೆಗಳನ್ನು ಮನಗಂಡು ಜನಪ್ರಿಯ ಕೋರ್ಸ್‌ಗಳನ್ನು ನೀಡುವುದರ ಜೊತೆಗೆ, ಕನ್ನಡದ ವಿವಿಧ ತಜ್ಞರನ್ನು ಸಹ ಆಮಂತ್ರಿಸಿ, ಉನ್ನತ ಗುಣಮಟ್ಟದ ವಿಷಯವಸ್ತುಗಳನ್ನು ಎಲ್ಲರಿಗೂ ಕೈಗೆಟಕುವ ಬೆಲೆಗೆ ನೀಡಲು ಬದ್ಧವಾಗಿದೆ.
Online Courses
Learn anywhere, anytime with flexible Kannada-based digital marketing courses.